ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ.ರಾಜ್‍ಕುಮಾರ್
ಸಂಗೀತ: ರಾಜನ್-ನಾಗೇಂದ್ರ

ಜೇನಿನ ಹೊಳೆಯೊ, ಹಾಲಿನ ಮಳೆಯೊ
ಸುಧೆಯೋ ಕನ್ನಡ ಸವಿನುಡಿಯೊ
ವಾಣಿಯ ವೀಣೆಯ ಸ್ವರಮಾಧುರ್ಯದ

ಸುಮಧುರ ಸುಂದರ ನುಡಿಯೋ.. 

||ಪಲ್ಲವಿ|| 

ಕವಿನುಡಿ ಕೋಗಿಲೆ ಹಾಡಿದ ಹಾಗೆ
ಸವಿನುಡಿ ತಣ್ಣನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ

ಮಕ್ಕಳು ನುಡಿದರೆ ಸಕ್ಕರೆಯಂತೆ

ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲಾ
ಸುಮಧುರ ಸುಂದರ ನುಡಿಯೋ

||ಪಲ್ಲವಿ|| 

ಕುಮಾರ ವ್ಯಾಸನ ಕಾವ್ಯದ ಚೆಂದ
ಕವಿ ಸರ್ವಜ್ಞನ ಪದಗಳ ಅಂದ
ದಾಸರು ಶರಣರು ನಾಡಿಗೆ ನೀಡಿದ

ಭಕ್ತಿಯ ಗೀತೆಗಳ ಪರಮಾನಂದ

ರನ್ನನು ರಚಿಸಿದ ಹೊನ್ನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ಸುಧೆಯೋ..ಆಹಾ!!

||ಪಲ್ಲವಿ|| 

Category: ಕನ್ನಡ ಚಿತ್ರಸಾಹಿತ್ಯ
Category: ಚಲಿಸುವ ಮೋಡಗಳು ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category: ಡಾ.ರಾಜ್‍ಕುಮಾರ್ ಗಾಯನ